Global Citizen

This blog is henceforth dedicated to articles and posts about science and technology for common man.

Monday, July 23, 2018

ಜನಪದ ಮತ್ತು ವಿಜ್ಞಾನ

ಜನಪದದಲ್ಲಿ ವಿಜ್ಞಾನ, ಗಣಿತ ಕುರಿತು ಉಲ್ಲೇಖಗಳನ್ನು ಕಾಣಬಹುದು.

ಉದಾಹರಣೆಗೆ,

ಒಂದು ಚಲೊ ಹಣ್ಣು
ಒಂದು ಹಣ್ಣಿಗೆ 12 ತೊಳೆ
1 ತೊಳೆಗೆ 30 ಬೀಜ
ಅದ್ರಾಗೆ ಅರ್ಧ ಕರೇವುಅರ್ಧ ಬಿಳೇವು
ಹಾಗಾದ್ರೆ ಇವು ಯಾವುವು?

ಇದರ ವಿವರಣೆ ಹೀಗಿದೆ
ಒಂದು ಚಲೋ ಹಣ್ಣು ಅಂದ್ರೆ - ಒಂದು ಸಂವತ್ಸರ
ಒಂದು ಸಂವತ್ಸರಕ್ಕೆ - ಹನ್ನೆರಡು ತಿಂಗಳು (ತೊಳೆಗಳು)
ಒಂದು ತಿಂಗಳಿಗೆ - ಮುವ್ವತ್ತು ದಿನಗಳು ( ಬೀಜಗಳು)
ಅರ್ಧ ಕರೇವು ಅಂದ್ರೆ - ಅಮಾವಸೆಯ 15 ದಿನಗಳು
ಅರ್ಧ ಬಿಳೇವು ಅಂದ್ರೆ - ಹುಣ್ಣಿಮೆಯ 15 ದಿನಗಳು

ಮತ್ತೊಂದು ಉದಾಹರಣೆ ಹೀಗಿದೆ
1 ಎಮ್ಮೆಗೆ 3 ಸೇರು ಹಾಲು
1 ಆಕಳಿಗೆ 11/2 ಸೇರು ಹಾಲು
1 ಆಡಿಗೆ 1/4 ಸೇರು ಹಾಲು
20 ಪ್ರಾಣಿಗೆ 20 ಸೇರು ಹಾಲು ಆಗಬೇಕು
ಹೇಗೆ ಸಮ ಮಾಡಬಾವುದು ಹೇಳು?

ಇದರ ವಿವರಣೆ ಹೀಗಿದೆ
5 ಎಮ್ಮೆಗೆ 15 ಸೇರು ಹಾಲು
1 ಆಕಳುಗೆ 11/2 ಸೇರು ಹಾಲು
14 ಆಡಿಗೆ 31/2 ಸೇರು ಹಾಲು
ಅಲ್ಲಿಗೆ 20 ಪ್ರಾಣಿ 20 ಸೇರು ಹಾಲು


Saturday, July 14, 2018

ಚಂದ್ರ ಕಣ್ಮರೆಯಾದರೆ ? ನಾವು, ಈ ಭೂಮಿ?

ಚಂದ್ರ ಗ್ರಹಣ ಕಳೆದರೂ ಚಂದ್ರನ ಸುಳಿವಿಲ್ಲ.
ಏನಾಯಿತು ಎನ್ನುವ ಆತಂಕ ಎಲ್ಲರ ಮನೆ ಮಾಡಿತ್ತು.
ಚಂದ್ರನಿಗೆ ಏನೂ ಆಗದಿರಲಿ ಎಂದು ಹಲವರು ಪ್ರಾರ್ಥಿಸಿದರು.

ಆದರೆ ಇಡೀ ವಿಶ್ವವೇ ಬೆಚ್ಚಿ ಬೀಳುವಂತಹ ಸುದ್ಧಿ ಅದು - ಚಂದ್ರ ಇನ್ನಿಲ್ಲ !!


ಭೂಮಿಯಿಂದ 3,80,000 ಕಿಲೋಮೀಟರ್‍ ದೂರದಲ್ಲಿರುವ ಚಂದ್ರ, ಇನ್ನಿಲ್ಲವೆಂದಾದರೆ ಏನಾಗಬಹುದು?

1) ಬೃಹತ್‍ ಆಕಾಶಕಾಯವೊಂದು ಅಪ್ಪಳಿಸಿ, ಚಂದ್ರ ಕೋಟ್ಯಾಂತರ ಚೂರುಗಳಾದ ಸನ್ನಿವೇಶ ಕಲ್ಪಿಸಿಕೊಳ್ಳಿ. ತಾನು ನಾಶವಾದರೂ, ಭೂಮಿಯನ್ನು ಬಿಟ್ಟಿರಲಾರೆ ಎನ್ನುತ್ತಾನೆ ಚಂದ್ರ.

ಶನಿಗ್ರಹಕ್ಕೆ ಇರುವ ಸುಂದರವಾದ ಉಂಗುರಗಳು, ಭೂಮಿಗೂ ಇರಲಿ ಎಂದು ತನ್ನ ಅವಶೇಷಗಳಿಂದ ಭೂಮಿಯ ಸುತ್ತಲೂ ಉಂಗುರಗಳನ್ನು ಸೃಷ್ಟಿಸುತ್ತಾರೆ. ಕಾಲಾಂತರದಲ್ಲಿ ಭೂಮಿಯ ಗುರುತ್ವಾಕರ್ಷಣೆ ಶಕ್ತಿಯಿಂದಾಗಿ, ಈ ಉಂಗುರಗಳು ಛಿದ್ರಗೊಂಡು, ಚಂದ್ರನ ಅವಶೇಷಗಳು ಭೂಮಿಯ ಮೇಲೆ ಬೀಳಲಾರಂಭಿಸುತ್ತವೆ.

ತನ್ನಿಂದ ಭೂಮಿಗೆ ಮತ್ತು ಜೀವಸಂಕುಲಕ್ಕೆ ಹಾನಿಯಾಗಬಾರದು ಎನ್ನುವ ಅಂತಃಕರಣ ಚಂದ್ರನದು. ಅದಕ್ಕೆ ಹೆಚ್ಚೆಂದರೆ ಸೆಕೆಂಡಿಗೆ 8 ಕಿಲೋಮೀಟರ್‍ ವೇಗದಲ್ಲಿ ಚಂದ್ರನ ಚೂರುಗಳು ಭೂಮಿಯ ಮೇಲೆ ಬೀಳಲು ಪ್ರಾರಂಭಿಸುತ್ತವೆ. ( ಕ್ಷುದ್ರಗ್ರಹಗಳು, ಧೂಮಕೇತುಗಳು ಸೆಕೆಂಡಿಗೆ 50 ರಿಂದ 100 ಕಿಲೋಮೀಟರ್‍ ವೇಗದಲ್ಲಿ ಬಂದು ಭೂಮಿಗೆ ಅಪ್ಪಳಿಸಿ, ಸರ್ವನಾಶ ಮಾಡುವ ಸಾಮರ್ಥ್ಯ ಹೊಂದಿರುತ್ತವೆ).

ಭೂಮಿಯ ವಾತಾವರಣವನ್ನು ಪ್ರವೇಶಿಸುವ ಚಂದ್ರನ ಚೂರುಗಳು ಬಹುತೇಕ ಸುಟ್ಟು ಭಸ್ಮವಾಗುತ್ತವೆ. ಕೆಲವು ಬೃಹತ್‍ ಗಾತ್ರದ ಚೂರುಗಳು ಸಮುದ್ರ ಭಾಗದಲ್ಲಿ ಬೀಳಬಹುದು ಕೂಡಾ. ಚಂದ್ರನ ಅವಶೇಷಗಳು ಭೂಮಿಗೆ ಅಪ್ಪಳಿಸುವುದರಿಂದ ಸಮಸ್ತ ಜೀವಸಂಕುಲ ವಿನಾಶವಾಗುವ ಸಾಧ್ಯತೆ ಕಡಿಮೆ ಎನ್ನಬಹುದು.

2) ಚಂದ್ರನಿಲ್ಲದ ಕಾರಣ, 23.5 ಡಿಗ್ರಿಯಿರುವ ಭೂಕಕ್ಷೆಯು 45ಡಿಗ್ರಿಗೂ ಹೆಚ್ಚಾಗಬಹುದು. ಹಾಗಾದರೆ, ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶ ಮತ್ತು ಭೂಮಿಯ ಮೇಲಿನ ವಾತಾವರಣ, ಮಳೆ, ಹಿಮದ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ.

3) ಚಂದ್ರನಿಲ್ಲದ ಮೇಲೆ ಸೂರ್ಯಗ್ರಹಣ, ಚಂದ್ರಗ್ರಹಣಗಳೂ ಇರುವುದಿಲ್ಲ. 

4) ಚಂದ್ರನಿಲ್ಲದೆ ಹುಣ್ಣಿಮೆ, ಅಮವಾಸ್ಯೆಗಳೂ ಇರುವುದಿಲ್ಲ. 

5) ರಾತ್ರಿಯ ಕಗ್ಗತ್ತಲ್ಲಿನಲ್ಲಿ ನಕ್ಷತ್ರಗಳನ್ನು ಕಾಣುವುದು ಕಷ್ಟವಾಗುತ್ತದೆ.

6) ಚಂದ್ರನಿಲ್ಲದೆ ಸಾಗರಗಳಿಗೆ ಉತ್ಸಾಹವಿಲ್ಲ.
ಸಮುದ್ರದ ಅಲೆಗಳ ಎತ್ತರ ಈಗಿರುವುದಕ್ಕಿಂತ ಶೇಕಡಾ 75ರಷ್ಟು ಕಡಿಮೆಯಾಗುತ್ತದೆ.
ಇದರಿಂದಾಗಿ ನೌಕೆಗಳ ಸಂಚಾರ, ಬಂದರುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ, ಸಮುದ್ರ ಜೀವಿಗಳಿಗೆ ಸಂಚಾರ ಮತ್ತು ಮೀನುಗಾರರಿಗೆ ನಿರಾಸೆಯ ದಿನಗಳು ಎದುರಾಗುತ್ತವೆ.

ಚಂದ್ರ ಕಣ್ಮರೆಯಾಗುವ ಸಾಧ್ಯತೆ ಈಗಿಲ್ಲ. ಹೀಗಾಗಿ ಆತಂಕ ಬೇಡ.

ಗ್ರಹಣ ಮೊದಲಾದ ಪ್ರಕೃತಿ ಸಹಜ ಕ್ರಿಯೆಗಳ ಹೆಸರಿನಲ್ಲಿ ಮೌಢ್ಯವನ್ನು ಬಿತ್ತಿ ಜನರನ್ನು ಹೆದರಿಸುವ ಮತ್ತು ಶೋಷಣೆ ಮಾಡುವವರ ಬಗ್ಗೆ ಎಚ್ಚರದಿಂದ ಇರೋಣ.

Friday, July 13, 2018

Cyber criminals target sensitive information

Cyber criminals are targeting sensitive information related to Defence, Industry, Finance and Research. Information obtained by them is often sold in the Dark Web Market.

For instance cyber criminals stole sensitive military information about Drones, Tanks, ways to survive IED, etc;. This information was offered for sale in the Dark Web Market for ridiculously low prices. One can imagine the situation if such information reached enemy countries or terror groups.

Increasing incidents of cyber attacks targeting sensitive health care documents and attempts to hold to ransom public health services is another major concern.

Common man has no access to such sensitive information. Then how come the Cyber criminals get to steal the same? One approach they take is to break into public email services used by contractors and get such information. Another approach is using vulnerabilities in routers.

For example, routers which allow users to plug in data storage devices like USB sticks to access the data stored on those devices from pretty much anywhere with an internet connection. 

If users don’t change the default login settings on these routers, it’s really easy for cyber criminals to access the same data. In such exposed routers, all that the cyber criminal has to do is to search for the FTP (file transfer) addresses of exposed routers.

Lessons from above two approaches is avoid using public email for sharing sensitive documents. People who use whatsapp like applications to share sensitive documents need to be discouraged. Second, please ensure that the routers used at home or office are secure and passwords are changed at regular interval. With increasing number of users adopting wireless and broadband internet services, router security is all the more important. 

Friday, July 06, 2018

A true artificial intelligent system is one that can learn on its own

Artificial General Intelligence (AGI) or True Artificial Intelligence.


A true artificial-intelligent system is one that can learn on its own. 

We're talking about neural networks from the likes of Google's DeepMind, which can make connections and reach meanings without relying on pre-defined behavioral algorithms. 

True Artificial Intelligence, can improve on past iterations, getting smarter and more aware, allowing it to enhance its capabilities and its knowledge.

Reinforcement learning is expected to help develop True Artificial Intelligence.
Example, 
 A baby tries to move its hands and feet, at some time it tries  to turn to its side, 
once it is able to turn to the side on its own, it attempts to crawl - these are natural actions and not based on previous learning supervised by parents or  dataset.
Crawling  baby attempts to stand up one day. It might not succeed initially and fall down. But the baby learns from the experience and continues in its attempt to stand on its own. The first baby steps in attempt to stand or walk may be assisted by parents. But from attempt to crawl to walk, it is experience that is reinforcing the learning of the baby.  

Once the baby is able to walk easily, it tries to run, jump and so on. All the while it is conscious about need to maintain balance and wrong steps can make it fall down.
The synergy between cognitive abilities of the baby, its learning and experiences help the baby in this journey.  

The general purpose Artificial platform would need all three deductive, inductive, and abductive reasoning.
Deductive reasoning starts out with a general statement or hypothesis and examines the possibilities to reach a specific, logical conclusion. The scientific method uses deduction to test hypotheses and theories. In deductive inference, we hold a theory and based on it we make a prediction of its consequences. That is, we predict what the observations should be if the theory were correct.  We go from the general — the theory — to the specific — the observations.
Inductive reasoning is the opposite of deductive reasoning. Inductive reasoning makes broad generalizations from specific observations. In inductive inference, we go from the specific to the general. We make many observations, discern a pattern, make a generalization, and infer an explanation or a theory.
Abductive reasoning usually starts with an incomplete set of observations and proceeds to the likeliest possible explanation for the group of observations. It is based on making and testing hypotheses using the best information available. It often entails making an educated guess after observing a phenomenon for which there is no clear explanation.
It is abductive reasoning that helps us jump from one context to another and is the most often missed tool in the AI arsenal.  You might say that the abductive reasoning capability we need would start with some sort of hypothetical scenario generator.  Those hypotheticals would then be winnowed down to the best estimate or guess.
Development of Commercially available Artificial General Intelligence may take several years to be completed. Till then its  advances in Artificial Narrow Intelligence that's available.


Thursday, July 05, 2018

Artificial Intelligence

As reported in media, more than 19,500 dialects are spoken in India. Add to this the number of dialects spoken across the world and we will get a long list of languages in the world.

Yet, a manuscript estimated to be about 600 years old, could not be read or understood till now. Yes this 240-page Voynich manuscript is written using what could be a coded language and inscrutable illustrations.  The manuscript consists of hundreds of fragile pages, some missing, with hand-written text going from left to right. Most pages are adorned with illustrations of diagrams, including plants, nude figures, and astronomical symbols. 
Some are of opinion that it was created using semi-random encryption schemes; anagrams; or writing systems in which vowels have been removed. Some have even suggested the document is an elaborate hoax.
Artificial Intelligence has been used in an attempt to understand which language is used to write  this manuscript and can we know more about what this manuscript is all about. 

Step1)  AI studied the text of the “Universal Declaration of Human Rights” as it was written in 380 different languages, looking for patterns. Following this training, the AI analyzed the Voynich manuscript, concluding with a high rate of certainty that the text was written in encoded Hebrew language.
Step2) A
 hypothesis was proposed by previous researchers—that this manuscript was written using alphagrams, that is, words in which text has been replaced by an alphabetically ordered anagram.  Hence, an algorithm that could take these anagrams and create real Hebrew words was developed.
Step3) AI deciphered the opening phrase of the manuscript as several disjointed words in Hebrew language. 
When you can't make a sentence of these words and understand the meaning, it is time for more work on AI.
After more iterations and corrections, we get‘She made recommendations to the priest, man of the house and me and people"
What AI did here was
a) Identify the language in which the manuscript was written. Hebrew in this case.

b) Coding scheme were letters are arranged in particular order ( Alphagram)
What next ?
Language experts in ancient Hebrew can work to decipher this entire manuscript.


This is one example of what is known as Artificial Narrow Intelligence (ANI) or weak AI



Monday, July 02, 2018

ಅಧಿಕ ಕೊಬ್ಬು ಎಂದು ಚಿತೆಗೂ ಚಿಂತೆ - ಭಾಗ2

ನಮ್ಮ ದೇಹದಲ್ಲಿರುವ Fat cells ಕುರಿತು "ಅಧಿಕ ಕೊಬ್ಬು ಎಂದು ಚಿತೆಗೂ ಚಿಂತೆ - ಭಾಗ 1 "ರಲ್ಲಿ ತಿಳಿದುಕೊಂಡೆವು.  ಈಗ ವಿಜ್ಞಾನಿಗಳ ಮಾಡುತ್ತಿರುವ ಸಂಶೋಧನೆ ಮತ್ತು ಅದಕ್ಕೆ Artificial Intelligence ಹೇಗೆ ನೆರವಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಒಬ್ಬ ಆರೋಗ್ಯವಂತ ವಯಸ್ಕ ವ್ಯಕ್ತಿಯ ದೇಹದಲ್ಲಿ ಸರಾಸರಿ 3000 ಕೋಟಿ Fat cells ಇರುತ್ತವೆ ಎಂದು ಅಂದಾಜು ಮಾಡಲಾಗಿದೆ.  ಆರೋಗ್ಯವಂತ Fatcells,  ನಮ್ಮ ದೇಹದಲ್ಲಿ ಇನ್ಸುಲಿನ್‍ ಪ್ರಮಾಣ ಹೆಚ್ಚಾದಾಗ, energy storage ಆಗಿ ಕೆಲಸ ಮಾಡಬೇಕು ಮತ್ತು ಇನ್ಸುಲಿನ್‍ ಪ್ರಮಾಣ ಕಡಿಮೆಯಾದಾಗ, energy provider ಆಗಿ ಕೆಲಸ ಮಾಡಬೇಕು. 

"ನೀವು ಎಷ್ಟು ಕ್ಯಾಲೋರಿ ಆಹಾರ ಸೇವಿಸುವಿರಿ, ಅಷ್ಟು ಕ್ಯಾಲೋರಿ ಬಳಕೆಯಾಗುವಂತೆ ಕೆಲಸ ಮಾಡಿದರೆ, ನಿಮಗೆ ಅಧಿಕ ಕೊಬ್ಬಿನ ಸಮಸ್ಯೆ ಬರುವುದಿಲ್ಲ."  


ಈ ಉಪದೇಶವು, ಆಹಾರ ಸೇವನೆ ಮತ್ತು ಚಟುವಟಿಕೆ ಬಗ್ಗೆ ಕೇಂದ್ರಿಕೃತವಾಗಿದೆ. ನಮ್ಮ ದೇಹದ genetics ನಲ್ಲಿ ಆಗಬಹುದಾದ ಸೂಕ್ಷ್ಮ ವ್ಯತ್ಯಾಸಗಳು, ಹೇಗೆ ನಮ್ಮ ಜೀವಕೋಶಗಳ ಪರಿಣಾಮ ಬೀರುತ್ತವೆ ಎಂದು ಇಲ್ಲಿ ಪರಿಗಣಿಸಲಾಗಿರುವುದಿಲ್ಲ. ಹೀಗಾಗಿ, ಕೆಲವರು ಎಷ್ಟೇ ವ್ಯಾಯಾಮ, ಉಪವಾಸ, ಮತ್ತೊಂದು ಮಾಡಿದರೂ ದೇಹದಲ್ಲಿರುವ ಕೊಬ್ಬು ಮಾತ್ರ ಕರಗುತ್ತಿಲ್ಲವೆನ್ನುವ ಪರಿಸ್ಥಿತಿ ಎದುರಿಸುತ್ತಾರೆ. 

ನಮ್ಮ ದೇಹದಲ್ಲಿರುವ ಅಂದಾಜು 3000 ಕೋಟಿ Fatcellಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾವೆ ಅಥವಾ ಇಲ್ಲ ಎಂದು ಕಂಡು ಹಿಡಿಯುವಲ್ಲಿ, machine learning ಮತ್ತು Artificial intelligence ಸಹಾಯ ಮಾಡಿವೆ. 

ಇದಕ್ಕಾಗಿ Thermogenesis ಅಂದರೆ ಜೀವಕೋಶದಲ್ಲಿ ಸಂಗ್ರಹವಾಗಿರುವ ಕೊಬ್ಬು ಶಾಖವಾಗಿ ಪರಿವರ್ತನೆಗೊಳ್ಳುವ ಕ್ರಿಯೆ ಹೇಗೆ ನೆಡೆಯುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾದರೆ ಗುರುತಿಸಬೇಕಾದ ಅಂಶಗಳೇನು ಎಂದು machine learning ಬಳಸಿ  ಕಂಪ್ಯೂಟರ್‍ ವ್ಯವಸ್ಥೆಗೆ ಹೇಳಿಕೊಡಲಾಯಿತು.  ಜೀವಕೋಶಗಳನ್ನು ಗುರುತಿಸುವುದು, ಅವುಗಳ ಸಹಜವಾಗಿ ಮತ್ತು ಅಸಹಜವಾಗಿ ಕೆಲಸ ಮಾಡುವಾಗ ಗುರುತಿಸಬೇಕಾದ ಅಂಶಗಳು, ಹೀಗೆ ಅತ್ಯಂತ ವಿಸ್ತೃತವಾದ ವಿವರಗಳನ್ನು ಹೊಂದಿರುವ ಡೇಟಾಬೇಸ್‍ ರಚಿಸಲಾಯಿತು.  Artificial intelligence ವ್ಯವಸ್ಥೆಗೆ ಬೇಕಾದ Algorithms,  Data lakes, ಮೊದಲಾದವುಗಳನ್ನು ರಚಿಸಿ, ಪರೀಕ್ಷಿಸಲಾಯಿತು. 

ಹೀಗೆ ಅಭಿವೃದ್ಧಿಪಡಿಸಲಾದ Artificial intelligence ವ್ಯವಸ್ಥೆಯಿಂದಾಗಿ, ಕಡಿಮೆ ಸಮಯದಲ್ಲಿ ಮತ್ತು ಹೆಚ್ಚು ನಿಖರತೆಯಿಂದ,  3000 ಕೋಟಿ ಜೀವಕೋಶಗಳಲ್ಲಿ ಯಾವ ಜೀವಕೋಶಗಳು ಸಹಜವಾಗಿ ಕೆಲಸ ಮಾಡುತ್ತಿವೆ ಮತ್ತು ಯಾವ ಜೀವಕೋಶಗಳು ಅಸಹಜವಾಗಿ ವರ್ತಿಸುತ್ತಿವೆ ಎಂದು ತಿಳಿಯಲು ವಿಜ್ಞಾನಿಗಳಿಗೆ ಸಹಾಯವಾಯಿತು.

ಜೀವಕೋಶಗಳು ಅಸಹಜವಾಗಿ ವರ್ತಿಸಲು ಕಾರಣಗಳೇನು ಎಂದು ಹುಡುಕಲು ಮುಂದಾದ ವಿಜ್ಞಾನಿಗಳಿಗೆ, Fat cells ಗಳ ಕಾರ್ಯಾಚರಣೆಯಲ್ಲಿ ಉಂಟಾಗುವ ಜೆನೆಟಿಕ್‍  difference, ಒಂದು ಪ್ರಮುಖ ಕಾರಣವೆಂದು ಗುರುತಿಸಲು ಕೂಡಾ artificial intelligence ಸಹಾಯ ಮಾಡಿದೆ. 


" Thymine (T) is replaced by a cytosine (C) nucleobase" ಎನ್ನುವ ವ್ಯತ್ಯಾಸವಾದಾಗ, ನಮ್ಮ ದೇಹದಲ್ಲಿರುವ Fat cells ಗಳು ಕೊಬ್ಬು ಸಂಗ್ರಹಿಸುವ ಕೆಲಸ ಮಾಡುತ್ತವೆ ಆದರೆ ಕೊಬ್ಬು ಬಳಸುವ ಕೆಲಸ ಮಾಡುವುದಿಲ್ಲ. 

ಈ ಜೆನೆಟಿಕ್‍ difference ಸರಿಪಡಿಸಿದರೆ, ಮತ್ತೆ  Fatcells ಮೊದಲಿನಂತೆ ಕೆಲಸ ಮಾಡುತ್ತವೆ ಅಥವಾ ಇಲ್ಲವೆಂದು CRISPR/Cas9  ತಂತ್ರಜ್ಞಾನ ಬಳಸಿ ವಿಜ್ಞಾನಿಗಳು ಪರೀಕ್ಷಿಸಿದರು.   ಈ ಪರೀಕ್ಷೆಗಳು ಯಶಸ್ವಿಯಾಗಿವೆ.

ಈಗ ಜನಸಾಮಾನ್ಯರಲ್ಲಿ ಹೇಗೆ ಈ ರೀತಿಯ ಜೆನೆಟಿಕ್‍ difference ನಿಂದ Fat cells ಕಾರ್ಯಾಚರಣೆಯಲ್ಲಿ ವ್ಯತ್ಯಾಸವಾಗಿರುವುದನ್ನು ಕಂಡು ಹಿಡಿಯುವುದು ಮತ್ತು ಈ ಲೋಪವನ್ನು ಸರಿಪಡಿಸುವುದು ಎಂದು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.