Global Citizen

This blog is henceforth dedicated to articles and posts about science and technology for common man.

Saturday, June 30, 2018

ಅಧಿಕ ಕೊಬ್ಬು ಎಂದು ಚಿತೆಗೂ ಚಿಂತೆ - ಭಾಗ1

ಕೊಬ್ಬು ನಮ್ಮ ದೇಹಕ್ಕೆ ಅಗತ್ಯ ಆದರೆ ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚು ಪ್ರಮಾಣದ ಕೊಬ್ಬು ಸಂಗ್ರಹವಾಗುವುದು  ಹಾನಿಕಾರಕವೆಂದು ವೈದ್ಯರು ಎಚ್ಚರಿಸುತ್ತಾರೆ. ವ್ಯಾಯಾಮ, ಪಥ್ಯ, ಮನೆ ವೈದ್ಯ ಮೊದಲಾಗಿ ಏನು ಮಾಡಿದರೂ ನಮ್ಮ ದೇಹದಲ್ಲಿರುವ ಅಧಿಕ ಪ್ರಮಾಣದ ಕೊಬ್ಬು ಕರಗುತ್ತಿಲ್ಲ, ಯಾಕೆ? ಎನ್ನುವುದು ಹಲವರ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ವಿಜ್ಞಾನಿಗಳ ಉತ್ತರವೇನು ಎಂದು ತಿಳಿದು ಕೊಳ್ಳುವ ಮೊದಲು, ಕೊಬ್ಬು ಕುರಿತು ಪರಿಚಯ ಮಾಡಿಕೊಳ್ಳೋಣ.

Adipocytes ಅಥವಾ Fat cell ಎಂದು ಕರೆಯಲಾಗುವ ಜೀವಕೋಶಗಳಲ್ಲಿ ನಮ್ಮ ದೇಹದಲ್ಲಿರುವ extra Lipids ಸಂಗ್ರಹವಾಗುತ್ತದೆ.

"Big Fat Myths: When You Lose Weight, Where Does the Fat Go?" (Ebury Australia, 2016) ಪುಸ್ತಕದಲ್ಲಿ ವಿಜ್ಞಾನಿ Ruben Meerman ರವರು, " Human triglyceride looks exactly like Olive oil, peanut oil and all the other triglycerides we squeeze out of plant seeds. It has the same yellowish color, the same energy density and the exact same chemical formula." ಎಂದು ವಿವರಿಸಿದ್ದಾರೆ.

ಎಲ್ಲಾ Adipocytes ಒಂದೇ ರೀತಿಯಿರುವುದಿಲ್ಲ. ನಾವು ಸಾಮಾನ್ಯವಾಗಿ ಕೊಬ್ಬು ಎಂದು ಕರೆಯುವುದು white fat ಆಗಿದ್ದು,  ಇದು ಎನರ್ಜಿ ಸಂಗ್ರಹವಾಗಿ ಕೆಲಸ ಮಾಡುತ್ತದೆ. ನಮ್ಮ ದೇಹದಲ್ಲಿ ಇನ್‍ಸುಲಿನ್‍ ಹೆಚ್ಚಾದಾಗ - ಉದಾಹರಣೆಗೆ, ನಾವು ಊಟ ಮಾಡಿದ ನಂತರ- ವೈಟ್‍ 
Adipocytes ಗಳು ಹೆಚ್ಚು Fatty acids ಗಳನ್ನು ಶೇಖರಿಸಿಟ್ಟು ಕೊಳ್ಳುತ್ತವೆ. ನಮ್ಮ ದೇಹದಲ್ಲಿ ಇನ್‍ಸುಲಿನ್‍ ಕಡಿಮೆಯಾದಾಗ ವೈಟ್‍ Adipocytes ಗಳು ತಮ್ಮಲ್ಲಿ ಸಂಗ್ರಹವಾಗಿರುವ ಎನರ್ಜಿಯನ್ನು ದೇಹಕ್ಕೆ ನೀಡುತ್ತವೆ. ( ಹೀಗಾಗದೆ ಹೋದಾಗ, ದೇಹದಲ್ಲಿ ಸಂಗ್ರಹವಾಗುವ ಕೊಬ್ಬು ಹೆಚ್ಚಾಗುತ್ತದೆ. ಈ ಕುರಿತು ಮುಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ)

ವಯಸ್ಕರಲ್ಲಿ Adipocytesಗಳ ಸಂಖ್ಯೆ ಸ್ಥಿರವಾಗಿರುತ್ತದೆ. ನಮ್ಮ ದೇಹದಲ್ಲಿ Adipocytes ಸಂಖ್ಯೆ ಹೆಚ್ಚಾಗುವುದರಿಂದ ನಮ್ಮ ದೇಹದ ತೂಕ ಹೆಚ್ಚಾಗುತ್ತದೆ ಎನ್ನುವುದು ಒಂದು ತಪ್ಪು ಕಲ್ಪನೆಯಾಗಿದೆ. ಅದೇ ರೀತಿ, ನಾವು ವ್ಯಾಯಮದಂತಹ ದೈಹಿಕ ಕ್ರಿಯೆಯಲ್ಲಿ ತೊಡಗಿದಾಗ, ನಮ್ಮ ದೇಹದಲ್ಲಿರುವ ಕೊಬ್ಬು ಎನರ್ಜಿಯಾಗಿ ದಹಿಸಲ್ಪಡುತ್ತದೆ ಎನ್ನುವುದು ಮತ್ತೊಂದು ತಪ್ಪು ಕಲ್ಪನೆಯಾಗಿದೆ.
"What really happens is that all of the atoms in fat combine with oxygen atoms to form carbon dioxide and water. Lots of energy is released by this process, but not one atom is destroyed or converted to energy." ಎಂದು Ruben Meerman ವಿವರಿಸುತ್ತಾರೆ. ಹೀಗೆ ಉಂಟಾಗುವ ನೀರನ್ನು ನಮ್ಮ ದೇಹವು ಬೆವರು, ಮಲ ಮತ್ತು ಮೂತ್ರಗಳ ಮೂಲಕ ವಿಸರ್ಜಿಸುತ್ತದೆ. ನಮ್ಮ ಶ್ವಾಸಕೋಶವು carbon dioxideನ್ನು ಹೊರಗೆ ಹಾಕುತ್ತವೆ.

 (ಮುಂದುವರೆಯುವುದು)


0 Comments:

Post a Comment

Subscribe to Post Comments [Atom]

<< Home