ಅಧಿಕ ಕೊಬ್ಬು ಎಂದು ಚಿತೆಗೂ ಚಿಂತೆ - ಭಾಗ2
ನಮ್ಮ ದೇಹದಲ್ಲಿರುವ Fat cells ಕುರಿತು "ಅಧಿಕ ಕೊಬ್ಬು ಎಂದು ಚಿತೆಗೂ ಚಿಂತೆ - ಭಾಗ 1 "ರಲ್ಲಿ ತಿಳಿದುಕೊಂಡೆವು. ಈಗ ವಿಜ್ಞಾನಿಗಳ ಮಾಡುತ್ತಿರುವ ಸಂಶೋಧನೆ ಮತ್ತು ಅದಕ್ಕೆ Artificial Intelligence ಹೇಗೆ ನೆರವಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳೋಣ.
ಒಬ್ಬ ಆರೋಗ್ಯವಂತ ವಯಸ್ಕ ವ್ಯಕ್ತಿಯ ದೇಹದಲ್ಲಿ ಸರಾಸರಿ 3000 ಕೋಟಿ Fat cells ಇರುತ್ತವೆ ಎಂದು ಅಂದಾಜು ಮಾಡಲಾಗಿದೆ. ಆರೋಗ್ಯವಂತ Fatcells, ನಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾದಾಗ, energy storage ಆಗಿ ಕೆಲಸ ಮಾಡಬೇಕು ಮತ್ತು ಇನ್ಸುಲಿನ್ ಪ್ರಮಾಣ ಕಡಿಮೆಯಾದಾಗ, energy provider ಆಗಿ ಕೆಲಸ ಮಾಡಬೇಕು.
"ನೀವು ಎಷ್ಟು ಕ್ಯಾಲೋರಿ ಆಹಾರ ಸೇವಿಸುವಿರಿ, ಅಷ್ಟು ಕ್ಯಾಲೋರಿ ಬಳಕೆಯಾಗುವಂತೆ ಕೆಲಸ ಮಾಡಿದರೆ, ನಿಮಗೆ ಅಧಿಕ ಕೊಬ್ಬಿನ ಸಮಸ್ಯೆ ಬರುವುದಿಲ್ಲ."
ಈ ಉಪದೇಶವು, ಆಹಾರ ಸೇವನೆ ಮತ್ತು ಚಟುವಟಿಕೆ ಬಗ್ಗೆ ಕೇಂದ್ರಿಕೃತವಾಗಿದೆ. ನಮ್ಮ ದೇಹದ genetics ನಲ್ಲಿ ಆಗಬಹುದಾದ ಸೂಕ್ಷ್ಮ ವ್ಯತ್ಯಾಸಗಳು, ಹೇಗೆ ನಮ್ಮ ಜೀವಕೋಶಗಳ ಪರಿಣಾಮ ಬೀರುತ್ತವೆ ಎಂದು ಇಲ್ಲಿ ಪರಿಗಣಿಸಲಾಗಿರುವುದಿಲ್ಲ. ಹೀಗಾಗಿ, ಕೆಲವರು ಎಷ್ಟೇ ವ್ಯಾಯಾಮ, ಉಪವಾಸ, ಮತ್ತೊಂದು ಮಾಡಿದರೂ ದೇಹದಲ್ಲಿರುವ ಕೊಬ್ಬು ಮಾತ್ರ ಕರಗುತ್ತಿಲ್ಲವೆನ್ನುವ ಪರಿಸ್ಥಿತಿ ಎದುರಿಸುತ್ತಾರೆ.
ನಮ್ಮ ದೇಹದಲ್ಲಿರುವ ಅಂದಾಜು 3000 ಕೋಟಿ Fatcellಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾವೆ ಅಥವಾ ಇಲ್ಲ ಎಂದು ಕಂಡು ಹಿಡಿಯುವಲ್ಲಿ, machine learning ಮತ್ತು Artificial intelligence ಸಹಾಯ ಮಾಡಿವೆ.
ಇದಕ್ಕಾಗಿ Thermogenesis ಅಂದರೆ ಜೀವಕೋಶದಲ್ಲಿ ಸಂಗ್ರಹವಾಗಿರುವ ಕೊಬ್ಬು ಶಾಖವಾಗಿ ಪರಿವರ್ತನೆಗೊಳ್ಳುವ ಕ್ರಿಯೆ ಹೇಗೆ ನೆಡೆಯುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾದರೆ ಗುರುತಿಸಬೇಕಾದ ಅಂಶಗಳೇನು ಎಂದು machine learning ಬಳಸಿ ಕಂಪ್ಯೂಟರ್ ವ್ಯವಸ್ಥೆಗೆ ಹೇಳಿಕೊಡಲಾಯಿತು. ಜೀವಕೋಶಗಳನ್ನು ಗುರುತಿಸುವುದು, ಅವುಗಳ ಸಹಜವಾಗಿ ಮತ್ತು ಅಸಹಜವಾಗಿ ಕೆಲಸ ಮಾಡುವಾಗ ಗುರುತಿಸಬೇಕಾದ ಅಂಶಗಳು, ಹೀಗೆ ಅತ್ಯಂತ ವಿಸ್ತೃತವಾದ ವಿವರಗಳನ್ನು ಹೊಂದಿರುವ ಡೇಟಾಬೇಸ್ ರಚಿಸಲಾಯಿತು. Artificial intelligence ವ್ಯವಸ್ಥೆಗೆ ಬೇಕಾದ Algorithms, Data lakes, ಮೊದಲಾದವುಗಳನ್ನು ರಚಿಸಿ, ಪರೀಕ್ಷಿಸಲಾಯಿತು.
ಹೀಗೆ ಅಭಿವೃದ್ಧಿಪಡಿಸಲಾದ Artificial intelligence ವ್ಯವಸ್ಥೆಯಿಂದಾಗಿ, ಕಡಿಮೆ ಸಮಯದಲ್ಲಿ ಮತ್ತು ಹೆಚ್ಚು ನಿಖರತೆಯಿಂದ, 3000 ಕೋಟಿ ಜೀವಕೋಶಗಳಲ್ಲಿ ಯಾವ ಜೀವಕೋಶಗಳು ಸಹಜವಾಗಿ ಕೆಲಸ ಮಾಡುತ್ತಿವೆ ಮತ್ತು ಯಾವ ಜೀವಕೋಶಗಳು ಅಸಹಜವಾಗಿ ವರ್ತಿಸುತ್ತಿವೆ ಎಂದು ತಿಳಿಯಲು ವಿಜ್ಞಾನಿಗಳಿಗೆ ಸಹಾಯವಾಯಿತು.
ಜೀವಕೋಶಗಳು ಅಸಹಜವಾಗಿ ವರ್ತಿಸಲು ಕಾರಣಗಳೇನು ಎಂದು ಹುಡುಕಲು ಮುಂದಾದ ವಿಜ್ಞಾನಿಗಳಿಗೆ, Fat cells ಗಳ ಕಾರ್ಯಾಚರಣೆಯಲ್ಲಿ ಉಂಟಾಗುವ ಜೆನೆಟಿಕ್ difference, ಒಂದು ಪ್ರಮುಖ ಕಾರಣವೆಂದು ಗುರುತಿಸಲು ಕೂಡಾ artificial intelligence ಸಹಾಯ ಮಾಡಿದೆ.
" Thymine (T) is replaced by a cytosine (C) nucleobase" ಎನ್ನುವ ವ್ಯತ್ಯಾಸವಾದಾಗ, ನಮ್ಮ ದೇಹದಲ್ಲಿರುವ Fat cells ಗಳು ಕೊಬ್ಬು ಸಂಗ್ರಹಿಸುವ ಕೆಲಸ ಮಾಡುತ್ತವೆ ಆದರೆ ಕೊಬ್ಬು ಬಳಸುವ ಕೆಲಸ ಮಾಡುವುದಿಲ್ಲ.
ಈ ಜೆನೆಟಿಕ್ difference ಸರಿಪಡಿಸಿದರೆ, ಮತ್ತೆ Fatcells ಮೊದಲಿನಂತೆ ಕೆಲಸ ಮಾಡುತ್ತವೆ ಅಥವಾ ಇಲ್ಲವೆಂದು CRISPR/Cas9 ತಂತ್ರಜ್ಞಾನ ಬಳಸಿ ವಿಜ್ಞಾನಿಗಳು ಪರೀಕ್ಷಿಸಿದರು. ಈ ಪರೀಕ್ಷೆಗಳು ಯಶಸ್ವಿಯಾಗಿವೆ.
ಈಗ ಜನಸಾಮಾನ್ಯರಲ್ಲಿ ಹೇಗೆ ಈ ರೀತಿಯ ಜೆನೆಟಿಕ್ difference ನಿಂದ Fat cells ಕಾರ್ಯಾಚರಣೆಯಲ್ಲಿ ವ್ಯತ್ಯಾಸವಾಗಿರುವುದನ್ನು ಕಂಡು ಹಿಡಿಯುವುದು ಮತ್ತು ಈ ಲೋಪವನ್ನು ಸರಿಪಡಿಸುವುದು ಎಂದು ವಿಜ್ಞಾನಿಗಳು ಕೆಲಸ ಮಾಡುತ್ತಿದ್ದಾರೆ.

1 Comments:
ತುಂಬಾ ಉಪಯುಕ್ತ ಮಾಹಿತಿ ಸರ್.ಧನ್ಯವಾದಗಳು
Post a Comment
Subscribe to Post Comments [Atom]
<< Home