Global Citizen

This blog is henceforth dedicated to articles and posts about science and technology for common man.

Saturday, July 14, 2018

ಚಂದ್ರ ಕಣ್ಮರೆಯಾದರೆ ? ನಾವು, ಈ ಭೂಮಿ?

ಚಂದ್ರ ಗ್ರಹಣ ಕಳೆದರೂ ಚಂದ್ರನ ಸುಳಿವಿಲ್ಲ.
ಏನಾಯಿತು ಎನ್ನುವ ಆತಂಕ ಎಲ್ಲರ ಮನೆ ಮಾಡಿತ್ತು.
ಚಂದ್ರನಿಗೆ ಏನೂ ಆಗದಿರಲಿ ಎಂದು ಹಲವರು ಪ್ರಾರ್ಥಿಸಿದರು.

ಆದರೆ ಇಡೀ ವಿಶ್ವವೇ ಬೆಚ್ಚಿ ಬೀಳುವಂತಹ ಸುದ್ಧಿ ಅದು - ಚಂದ್ರ ಇನ್ನಿಲ್ಲ !!


ಭೂಮಿಯಿಂದ 3,80,000 ಕಿಲೋಮೀಟರ್‍ ದೂರದಲ್ಲಿರುವ ಚಂದ್ರ, ಇನ್ನಿಲ್ಲವೆಂದಾದರೆ ಏನಾಗಬಹುದು?

1) ಬೃಹತ್‍ ಆಕಾಶಕಾಯವೊಂದು ಅಪ್ಪಳಿಸಿ, ಚಂದ್ರ ಕೋಟ್ಯಾಂತರ ಚೂರುಗಳಾದ ಸನ್ನಿವೇಶ ಕಲ್ಪಿಸಿಕೊಳ್ಳಿ. ತಾನು ನಾಶವಾದರೂ, ಭೂಮಿಯನ್ನು ಬಿಟ್ಟಿರಲಾರೆ ಎನ್ನುತ್ತಾನೆ ಚಂದ್ರ.

ಶನಿಗ್ರಹಕ್ಕೆ ಇರುವ ಸುಂದರವಾದ ಉಂಗುರಗಳು, ಭೂಮಿಗೂ ಇರಲಿ ಎಂದು ತನ್ನ ಅವಶೇಷಗಳಿಂದ ಭೂಮಿಯ ಸುತ್ತಲೂ ಉಂಗುರಗಳನ್ನು ಸೃಷ್ಟಿಸುತ್ತಾರೆ. ಕಾಲಾಂತರದಲ್ಲಿ ಭೂಮಿಯ ಗುರುತ್ವಾಕರ್ಷಣೆ ಶಕ್ತಿಯಿಂದಾಗಿ, ಈ ಉಂಗುರಗಳು ಛಿದ್ರಗೊಂಡು, ಚಂದ್ರನ ಅವಶೇಷಗಳು ಭೂಮಿಯ ಮೇಲೆ ಬೀಳಲಾರಂಭಿಸುತ್ತವೆ.

ತನ್ನಿಂದ ಭೂಮಿಗೆ ಮತ್ತು ಜೀವಸಂಕುಲಕ್ಕೆ ಹಾನಿಯಾಗಬಾರದು ಎನ್ನುವ ಅಂತಃಕರಣ ಚಂದ್ರನದು. ಅದಕ್ಕೆ ಹೆಚ್ಚೆಂದರೆ ಸೆಕೆಂಡಿಗೆ 8 ಕಿಲೋಮೀಟರ್‍ ವೇಗದಲ್ಲಿ ಚಂದ್ರನ ಚೂರುಗಳು ಭೂಮಿಯ ಮೇಲೆ ಬೀಳಲು ಪ್ರಾರಂಭಿಸುತ್ತವೆ. ( ಕ್ಷುದ್ರಗ್ರಹಗಳು, ಧೂಮಕೇತುಗಳು ಸೆಕೆಂಡಿಗೆ 50 ರಿಂದ 100 ಕಿಲೋಮೀಟರ್‍ ವೇಗದಲ್ಲಿ ಬಂದು ಭೂಮಿಗೆ ಅಪ್ಪಳಿಸಿ, ಸರ್ವನಾಶ ಮಾಡುವ ಸಾಮರ್ಥ್ಯ ಹೊಂದಿರುತ್ತವೆ).

ಭೂಮಿಯ ವಾತಾವರಣವನ್ನು ಪ್ರವೇಶಿಸುವ ಚಂದ್ರನ ಚೂರುಗಳು ಬಹುತೇಕ ಸುಟ್ಟು ಭಸ್ಮವಾಗುತ್ತವೆ. ಕೆಲವು ಬೃಹತ್‍ ಗಾತ್ರದ ಚೂರುಗಳು ಸಮುದ್ರ ಭಾಗದಲ್ಲಿ ಬೀಳಬಹುದು ಕೂಡಾ. ಚಂದ್ರನ ಅವಶೇಷಗಳು ಭೂಮಿಗೆ ಅಪ್ಪಳಿಸುವುದರಿಂದ ಸಮಸ್ತ ಜೀವಸಂಕುಲ ವಿನಾಶವಾಗುವ ಸಾಧ್ಯತೆ ಕಡಿಮೆ ಎನ್ನಬಹುದು.

2) ಚಂದ್ರನಿಲ್ಲದ ಕಾರಣ, 23.5 ಡಿಗ್ರಿಯಿರುವ ಭೂಕಕ್ಷೆಯು 45ಡಿಗ್ರಿಗೂ ಹೆಚ್ಚಾಗಬಹುದು. ಹಾಗಾದರೆ, ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶ ಮತ್ತು ಭೂಮಿಯ ಮೇಲಿನ ವಾತಾವರಣ, ಮಳೆ, ಹಿಮದ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ.

3) ಚಂದ್ರನಿಲ್ಲದ ಮೇಲೆ ಸೂರ್ಯಗ್ರಹಣ, ಚಂದ್ರಗ್ರಹಣಗಳೂ ಇರುವುದಿಲ್ಲ. 

4) ಚಂದ್ರನಿಲ್ಲದೆ ಹುಣ್ಣಿಮೆ, ಅಮವಾಸ್ಯೆಗಳೂ ಇರುವುದಿಲ್ಲ. 

5) ರಾತ್ರಿಯ ಕಗ್ಗತ್ತಲ್ಲಿನಲ್ಲಿ ನಕ್ಷತ್ರಗಳನ್ನು ಕಾಣುವುದು ಕಷ್ಟವಾಗುತ್ತದೆ.

6) ಚಂದ್ರನಿಲ್ಲದೆ ಸಾಗರಗಳಿಗೆ ಉತ್ಸಾಹವಿಲ್ಲ.
ಸಮುದ್ರದ ಅಲೆಗಳ ಎತ್ತರ ಈಗಿರುವುದಕ್ಕಿಂತ ಶೇಕಡಾ 75ರಷ್ಟು ಕಡಿಮೆಯಾಗುತ್ತದೆ.
ಇದರಿಂದಾಗಿ ನೌಕೆಗಳ ಸಂಚಾರ, ಬಂದರುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ, ಸಮುದ್ರ ಜೀವಿಗಳಿಗೆ ಸಂಚಾರ ಮತ್ತು ಮೀನುಗಾರರಿಗೆ ನಿರಾಸೆಯ ದಿನಗಳು ಎದುರಾಗುತ್ತವೆ.

ಚಂದ್ರ ಕಣ್ಮರೆಯಾಗುವ ಸಾಧ್ಯತೆ ಈಗಿಲ್ಲ. ಹೀಗಾಗಿ ಆತಂಕ ಬೇಡ.

ಗ್ರಹಣ ಮೊದಲಾದ ಪ್ರಕೃತಿ ಸಹಜ ಕ್ರಿಯೆಗಳ ಹೆಸರಿನಲ್ಲಿ ಮೌಢ್ಯವನ್ನು ಬಿತ್ತಿ ಜನರನ್ನು ಹೆದರಿಸುವ ಮತ್ತು ಶೋಷಣೆ ಮಾಡುವವರ ಬಗ್ಗೆ ಎಚ್ಚರದಿಂದ ಇರೋಣ.

0 Comments:

Post a Comment

Subscribe to Post Comments [Atom]

<< Home