ಜನಪದ ಮತ್ತು ವಿಜ್ಞಾನ
ಜನಪದದಲ್ಲಿ ವಿಜ್ಞಾನ, ಗಣಿತ ಕುರಿತು ಉಲ್ಲೇಖಗಳನ್ನು ಕಾಣಬಹುದು.
ಉದಾಹರಣೆಗೆ,
ಒಂದು ಚಲೊ ಹಣ್ಣು
ಒಂದು ಹಣ್ಣಿಗೆ 12 ತೊಳೆ
1 ತೊಳೆಗೆ 30 ಬೀಜ
ಅದ್ರಾಗೆ ಅರ್ಧ ಕರೇವು, ಅರ್ಧ ಬಿಳೇವು
ಹಾಗಾದ್ರೆ ಇವು ಯಾವುವು?
ಇದರ ವಿವರಣೆ ಹೀಗಿದೆ
ಒಂದು ಚಲೋ ಹಣ್ಣು ಅಂದ್ರೆ - ಒಂದು ಸಂವತ್ಸರ
ಒಂದು ಸಂವತ್ಸರಕ್ಕೆ - ಹನ್ನೆರಡು ತಿಂಗಳು (ತೊಳೆಗಳು)
ಒಂದು ತಿಂಗಳಿಗೆ - ಮುವ್ವತ್ತು ದಿನಗಳು ( ಬೀಜಗಳು)
ಅರ್ಧ ಕರೇವು ಅಂದ್ರೆ - ಅಮಾವಸೆಯ 15 ದಿನಗಳು
ಅರ್ಧ ಬಿಳೇವು ಅಂದ್ರೆ - ಹುಣ್ಣಿಮೆಯ 15 ದಿನಗಳು
ಮತ್ತೊಂದು ಉದಾಹರಣೆ ಹೀಗಿದೆ
1 ಎಮ್ಮೆಗೆ 3 ಸೇರು ಹಾಲು
1 ಆಕಳಿಗೆ 11/2 ಸೇರು ಹಾಲು
1 ಆಡಿಗೆ 1/4 ಸೇರು ಹಾಲು
20 ಪ್ರಾಣಿಗೆ 20 ಸೇರು ಹಾಲು ಆಗಬೇಕು
ಹೇಗೆ ಸಮ ಮಾಡಬಾವುದು ಹೇಳು?
ಇದರ ವಿವರಣೆ ಹೀಗಿದೆ
5 ಎಮ್ಮೆಗೆ 15 ಸೇರು ಹಾಲು
1 ಆಕಳುಗೆ 11/2 ಸೇರು ಹಾಲು
14 ಆಡಿಗೆ 31/2 ಸೇರು ಹಾಲು
ಅಲ್ಲಿಗೆ 20 ಪ್ರಾಣಿ 20 ಸೇರು ಹಾಲು
0 Comments:
Post a Comment
Subscribe to Post Comments [Atom]
<< Home