Global Citizen

This blog is henceforth dedicated to articles and posts about science and technology for common man.

Friday, August 11, 2017

ಬ್ರಿಟನ್‍ನಲ್ಲಿರುವ ಟಿಪ್ಪುಸೈನ್ಯದ ಮೈಸೂರು ಫಿರಂಗಿಗಳು

Powis Castleನಲ್ಲಿರುವ ಹಿತ್ತಾಳೆಯಿಂದ ಮಾಡಿರುವ ಸುಮಾರು 3 ಪೌಂಡರ್‍ ಸಾಮರ್ಥ್ಯದ ಫಿರಂಗಿ

ಟಿಪ್ಪು ಸುಲ್ತಾನನ ಸೈನ್ಯ ತಯಾರಿಸಿರುವ ಫಿರಂಗಿ ಎಂದು ಖಚಿತ ಪಡಿಸುವಲ್ಲಿ ನೆರವಾಗುವುದು
1) ಫಿರಂಗಿ ಬಾಯಿಗೆ ಹುಲಿಯ ಮುಖದಂತೆ ಮಾಡಿರುವುದು
2) ಫಿರಂಗಿಯ ಮೇಲೆ HYDR  ಎಂದು ಕೊರೆಯಲಾಗಿರುವುದು
3)“La illah ul Allah” ಎಂದು ಫಿರಂಗಿಯ ಮೇಲೆ ಕೊರೆಯಲಾಗಿರುವುದು
Robert Clive, ನವಾಬ ಸಿರಾಜುದ್ದೀನ್‍ ದೌಲಾರವರ ಕದನ ಕುರಿತು ನೆನಪು ಮಾಡಿಕೊಳ್ಳಿ. ಈ ಕ್ಲೈವ್‍ನ ಹಿರಿಯ ಮಗ ಎಡ್ವರ್ಡ ಕ್ಲೈವ್‍. ಇವರು ಟಿಪ್ಪು ಸುಲ್ತಾನ ಮತ್ತು ಬ್ರಿಟೀಷ ಯುದ್ಧಗಳ ಅವಧಿಯಲ್ಲಿ ಮದ್ರಾಸ್‍ ಗರ್ವನರ್‍ ಆಗಿದ್ದರು ಹಾಗೂ ಇವರು 1st Earl of Powis ಗೌರವವನ್ನು ಪಡೆದಿದ್ದಾರೆ.

ಶ್ರೀರಂಗಪಟ್ಟಣದಲ್ಲಿದ್ದ 927 ಫಿರಂಗಿಗಳು ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ ವಶವಾದವು. ಇವುಗಳಲ್ಲಿ 400 ಹಿತ್ತಾಳೆಯಿಂದ ಮಾಡಿದ ಫಿರಂಗಿಗಳಿದ್ದವು. ಎರಡು ಇಂತಹ ಹಿತ್ತಾಳೆಯ ಫಿರಂಗಿಗಳನ್ನು  ಎಡ್ವರ್ಡ ಕ್ಲೈವ್‍ ಅವರಿಗೆ ಸ್ಮರಣಿಕೆಯಾಗಿ ನೀಡಲಾಯಿತು. ನಂತರ ಈ ಫಿರಂಗಿಗಳನ್ನು ಬ್ರಿಟನ್‍ ದೇಶದ Welshpoolನಲ್ಲಿರುವ Powis Castle ಗೆ ಸಾಗಿಸಲಾಯಿತು. ಬ್ರಿಟನ್‍ ಸೈನ್ಯದಲ್ಲಿ ಫಿರಂಗಿಗಳಿಗೆ gray paint ಮಾಡಿದಂತೆ ಈ ಫಿರಂಗಿಗಳಿಗೂ gray paint ಮಾಡಲಾಗಿದೆ. ಇಂತಹ ಫಿರಂಗಿಗಳನ್ನು ಬಳಸಲು ಸೂಕ್ತವಾದ ಕ್ರೇಡಲ್‍ ಮತ್ತು ಚಕ್ರಗಳನ್ನು ಬ್ರಿಟೀಷ್‍ ಸೈನ್ಯಾಧಿಕಾರಿಗಳು ವಿನ್ಯಾಸಗೊಳಿಸಿ, ಬ್ರಿಟನ್‍ನಲ್ಲಿ ತಯಾರಿಸಿ ಈ ಫಿರಂಗಿಗಳಿಗೆ ಅಳವಡಿಸಿದ್ದಾರೆ.  ಈಗಲೂ ಬಳಸಲು ಸಾಧ್ಯವಿರುವಷ್ಟು ಸುಸ್ಥಿತಿಯಲ್ಲಿರುವ ಕೆಲವೇ ಕೆಲವು ಮೈಸೂರು ಫಿರಂಗಿಗಳಲ್ಲಿ ಈ ಎರಡೂ ಫಿರಂಗಿಗಳಿವೆ.

ಬ್ರಿಟೀಷ್‍ರ ವಿರುದ್ಧ ಬಳಸಲು ತಯಾರಿಸಲಾದ ಈ ಫಿರಂಗಿಗಳು, ಕರ್ನಲ್‍ John Kynaston Powell ನೇತೃತ್ವದ Shorpshire Volunteer Infantry ನಲ್ಲಿ ಸೇವೆ ಸಲ್ಲಿಸಿವೆ. ಹುಲಿ ತಲೆಯ ಫಿರಂಗಿಗಳಿರುವ Infantry ಇದು ಎಂದು ಆಗ ಬ್ರಿಟನ್‍ನಲ್ಲಿ ಜನಪ್ರಿಯವಾಗಿತ್ತು. ಎಡ್ವರ್ಡ ಕೈವ್‍ ಅವರ ಮಗನ ಮದುವೆ 1818ರಲ್ಲಿ ನೆಡೆದಾಗ ಈ ಫಿರಂಗಿಗಳನ್ನು ಹಾರಿಸಿ ಸಂಭ್ರಮಿಸಲಾಗಿತ್ತು. 1832ರಲ್ಲಿ ಯುವರಾಣಿ ವಿಕ್ಟೋರಿಯಾ ಅವರು Welshpool ಗೆ ಭೇಟಿ ನೀಡಿದಾಗ ಅವರಿಗೆ ಗೌರವ ರಕ್ಷೆ ನೀಡುವಾಗ ಈ ಫಿರಂಗಿಗಳನ್ನು ಹಾರಿಸಲಾಗಿತ್ತು.

ಇಂತಹ ಫಿರಂಗಿಗಳನ್ನು ಬ್ರಿಟನ್‍ ದೇಶದಲ್ಲಿರುವ Powis Castle, Isle of Wight ನಲ್ಲಿರುವ Leeds Royal Armouries ಮತ್ತು Sandhurst ನಲ್ಲಿ ಇಟ್ಟಿದ್ದಾರೆ. ಆಸಕ್ತಿ ಇದ್ದವರು ಅಗತ್ಯ ಅನುಮತಿಗಳನ್ನು ಪಡೆದು ಅಲ್ಲಿ ಹೋಗಿ ನೋಡಬಹುದು.

Powis Castleನಲ್ಲಿ ಟಿಪ್ಪು ಸುಲ್ತಾನಗೆ ಸೇರಿದ ಅನೇಕ ವಸ್ತುಗಳು, ಭಾರತದ ರಾಜರಿಗೆ ಸಂಬಂಧಪಟ್ಟ ದಾಖಲೆಗಳ ಸಂಗ್ರಹವಿದೆ. ಇವುಗಳ ಬಗ್ಗೆ ಮತ್ತೊಮ್ಮೆ ತಿಳಿದುಕೊಳ್ಳೋಣ.